ಇಂದಿನಿಂದ ಡಿಎಲ್•, ಆರ್•ಸಿ ಕಾರ್ಡ್• ಬದಲು ಇ- ಕಾಪಿ ತೋರಿಸಿ
1. ಕಾರ್ಡ್• ತೋರಿಸುವ ಅಗತ್ಯವಿಲ್ಲ:
2
ಇಲ್ಲಿಯವರೆಗೆ ಡಿಎಲ್• ಮತ್ತು ಆರ್•ಸಿ ಕಾರ್ಡ್•ಗಳನ್ನು ಸವಾರರು ಜೊತೆಯಲ್ಲೇ ಇಟ್ಟುಕೊಳ್ಳಬೇಕಿತ್ತು. ಸಂಚಾರಿ ಪೊಲೀಸರ ತಪಾಸಣೆಯ ವೇಳೆ ಇದನ್ನು ತೋರಿಸಬೇಕಿತ್ತು. ಆದರೆ ಇನ್ನು ಮುಂದೆ ತಪಾಸಣೆಯ ವೇಳೆ ಇ-ಕಾಪಿಗಳನ್ನು ತೋರಿಸಬಹುದಾಗಿದೆ.
3
ಇಷ್ಟೇ ಅಲ್ಲದೇ ಒಂದು ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ಕೇಸ್• ದಾಖಲಾದಾಗ ಇ -ದಾಖಲೆಗಳನ್ನು ಅಧಿಕಾರಿಗಳು ಸೀಜ್• ಮಾಡಬಹುದು. ಇದರ ಜೊತೆ ಇ-ಚಲನ್• ಮೂಲಕ ದಂಡವನ್ನು ಪಾವತಿಸಬಹುದು. ಸರ್ಕಾರದ ಡಿಜಿಟಲ್• ಪೋರ್ಟಲ್•ನಲ್ಲಿ ಇ- ಚಲನ್• ಲಭ್ಯವಿದೆ.
2. ಉಲ್ಲಂಘನೆ ಮಾಹಿತಿ ಅಪ್•ಡೇಟ್•:
4
ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಸವಾರನ ಮೇಲೆ ಕೇಸ್• ದಾಖಲಾದ ಅಂಶವೂ ಡಿಜಿಟಲ್• ಪೋರ್ಟಲ್•ನಲ್ಲಿ ನಿರಂತರವಾಗಿ ಅಪ್•ಡೇಟ್• ಆಗುತ್ತದೆ. ಪೋರ್ಟಲ್ ಅನ್ನು ಕಾಲಾನುಕ್ರಮದಲ್ಲಿ ನವೀಕರಿಸಲಾಗುತ್ತಿರುತ್ತದೆ.
5
3. ಹೊಸ ವ್ಯವಸ್ಥೆಯಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ:
6
ಸವಾರರ ಎಲ್ಲ ಉಲ್ಲಂಘನಾ ಪ್ರಕರಣಗಳು ಪೋರ್ಟಲ್•ನಲ್ಲಿ ದಾಖಲಾಗುತ್ತಿರುತ್ತದೆ. ಇದರಿಂದಾಗಿ ಸವಾರನ ನಡತೆಯನ್ನು ಅಧಿಕಾರಿಗಳು ತಿಳಿಯಬಹುದು. ಅಷ್ಟೇ ಅಲ್ಲದೇ ಸಂಚಾರ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೋ ಇಲ್ಲವೋ ಎನ್ನುವುದು ಇದರಲ್ಲಿ ಗೊತ್ತಾಗುತ್ತದೆ.m
4. ದಾಖಲೆಗಳನ್ನು ಎಲ್ಲಿ ಸಂಗ್ರಹಿಸಬಹುದು? 7 ಕೇಂದ್ರ ಸರ್ಕಾರದ ಡಿಜಿ ಲಾಕರ್• ಅಥವಾ ಎಂ–ಪರಿವಾಹನ್•• ರೀತಿಯ ಪೋರ್ಟಲ್•ಗಳಿಗೆ ದಾಖಲೆಗಳನ್ನು ಅಪ್•ಲೋಡ್• ಮಾಡಬಹುದು. ತಪಾಸಣೆ ಸಮಯದಲ್ಲಿ ಕೇಳಿದಾಗ ಡಿಜಿಟಲ್• ಪ್ರತಿಯನ್ನು ತೋರಿಸಬಹುದು.
5. ಮಾರ್ಗಸೂಚಿಗಾಗಿ ಮೊಬೈಲ್• ಬಳಕೆ
8
ವಾಹನ ಚಾಲನೆ ಮಾಡುವ ಸಮಯದಲ್ಲಿ ಮಾರ್ಗ ತಿಳಿಯಲು (ಮ್ಯಾಪ್•/ನ್ಯಾವಿಗೇಷನ್•) ಮಾತ್ರ ಮೊಬೈಲ್• ಬಳಕೆ ಮಾಡಬಹುದಾಗಿದೆ. ಡ್ರೈವರ್• ಏಕಾಗ್ರತೆಗೆ ಭಂಗ ಬಾರದ ರೀತಿಯಲ್ಲಿ ಬಳಸಬೇಕು ಎಂದು ತಿಳಿಸಲಾಗಿದೆ. ಒಂದು ವೇಳೆ ಚಾಲನೆಯ ಸಮಯದಲ್ಲಿ ಈ ಕಾರಣವನ್ನು ಹೊರತು ಪಡಿಸಿ ಮೊಬೈಲ್• ಬಳಕೆ ಮಾಡಿದ್ದು ಕಂಡು ಬಂದಲ್ಲಿ ಈಗ ಇರುವ ಸಂಚಾರ ನಿಯಮಗಳ ಪ್ರಕಾರ ದಂಡ ವಿಧಿಸಲಾಗುತ್ತದೆ.
9
ವಾಹನ ಚಲಾಯಿಸುವಾಗ ಮೊಬೈಲ್• ಬಳಸಿದರೆ 1,000 ದಿಂದ 5 ಸಾವಿರ ರೂ.ಗಳ ವರೆಗೆ ದಂಡ ವಿಧಿಸಲು ಅವಕಾಶವಿದೆ. ಈ ನಿಯಮವೂ ಅ. 1 ರಿಂದ ಜಾರಿಗೆ ಬಂದಿದೆ.