ಸಿಗ್ನಲ್ ಗಳಲ್ಲಿ ರೂಲ್ಸ್ ಬ್ರೇಕ್ ಮಾಡೋರೆ ಇನ್ಮುಂದೆ ಎಚ್ಚರವಾಗಿರಬೇಕಿದೆ. ನಿಮ್ಮ ವಾಹನಗಳ ಮೇಲೆ ಸಂಚಾರಿ ಪೊಲೀಸರು ಹದ್ದಿನಕಣ್ಣಿಡಲು ಮುಂದಾಗಿದ್ದಾರೆ. ಸ್ವಲ್ಪ ಯಾಮಾರಿದ್ರೂ ನಿಮ್ಮ ವಾಹನದ ಮೇಲೆ ಕೇಸ್ ಬೀಳೋದು ಪಕ್ಕಾ
ಸಿಗ್ನಲ್ನಲ್ಲಿ ಪೊಲೀಸ್ರು ಇಲ್ಲ ಅಂತ ಸಿಗ್ನಲ್ ಜಂಪ್ ಮಾಡ್ತೀರಾ? ಯಾರೂ ಪೊಲೀಸರಿಲ್ಲ ಅಂತ ತ್ರಿಬಲ್ ರೈಡಿಂಗ್ ಮಾಡಿದ್ರೆ ಮೂರು ಜನರ ಫೋಟೋ ಸಮೇತ ಕೇಸ್ ಬೀಳುತ್ತೆ ಎಚ್ಚರ.
ಬೆಂಗಳೂರು ಸಂಚಾರಿ ಪೊಲೀಸರು ಫುಲ್ ಅಪ್ಡೇಟ್ ಆಗಿದ್ದು, ರೂಲ್ಸ್ ಬ್ರೇಕ್ ಮಾಡಿದ್ರೆ ವಿಡಿಯೋ ಸಮೇತ ಸಂಚಾರಿ ಪೊಲೀಸರು ಫೈನ್ ಹಾಕ್ತಾರೆ.
ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS) ಕಾರ್ಯಾಚರಣೆ ನೆಡಸ್ತಿದೆ. ಹೈಯೆಂಡ್ ಕ್ಯಾಮೆರಾ ಮೂಲಕ ರೂಲ್ಸ್ ಬ್ರೇಕ್ ಮಾಡೋರ ಮೇಲೆ ಪೊಲೀಸರು ಕಣ್ಣು ಹಾಕಿದ್ದಾರೆ.
ಹೈ ರೆಸಲ್ಯೂಷನ್ ಇರೋ ಹೈಯೆಂಡ್ ಕ್ಯಾಮರಾ ನಿಮ್ಮ ಪ್ರತಿ ಮೂಮೆಂಟ್ ರೆಕಾರ್ಡ್ ಮಾಡುತ್ತೆ. 24 ಗಂಟೆಯೂ ನಿಮ್ಮ ಪ್ರತೀ ವೈಯ್ಲೇಷನ್ ಮೂಮೆಂಟ್ ರೆಕಾರ್ಡ್ ಆಗುತ್ತೆ.
ತ್ರಿಬಲ್ ರೈಡಿಂಗ್ ಇದ್ರೆ ಮೂರು ಜನರ ಫೋಟೋ, ಸೀಟ್ ಬೆಲ್ಟ್ ಹಾಕದಿದ್ರೆ, ಜೀಬ್ರಾ ಕ್ರಾಸ್ ದಾಟಿದ್ರೆ ಸಹ ಫೈನ್ ಬೀಳಲಿದೆ.
ಈ ಕ್ಯಾಮೆರಾಗಳು ರಾತ್ರಿ ಹೊತ್ತಿನಲ್ಲೂ ಕಾರ್ಯನಿರ್ವಹಿಸಲಿದೆ. ಈಗಾಗಲೇ 50 ಜಂಕ್ಷನ್ ಗಳಲ್ಲಿ 250 ITMS ಕ್ಯಾಮರಾ ಅಳವಡಿಕೆ ಮಾಡಲಿದೆ.
ರೂಲ್ಸ್ ಬ್ರೇಕ್ ಮಾಡಿದ ತಕ್ಷಣವೇ 5 ಸೆಕೆಂಡ್ ಗೆ ನಿಮ್ಮ ಮೊಬೈಲ್ಗೆ ವಿಡಿಯೋ ಜೊತೆ ಬರುತ್ತೆ ಫೈನ್ ರಶೀದಿಯೂ ಬರಲಿದೆ.
ಮೊಬೈಲ್ ನಲ್ಲೇ ಕ್ಯೂ ಆರ್ ಕೋಡ್ ಮೂಲಕ ಫೈನ್ ಕಟ್ಬೇಕು. ಫೈನ್ ಕಟ್ಟಿಲ್ಲ ಅಂದ್ರೆ 24 ಗಂಟೆಗಳಲ್ಲಿ ಮನೆ ಬಾಗಿಲಿಗೆ ಬರುತ್ತೆ ನೊಟೀಸ್. ನೊಟೀಸ್ ಬಂದ್ಮೇಲೆ ಕೋರ್ಟ್ ಗೆ ಹೋಗಿ ಫೈನ್ ಕಟ್ಬೇಕಾಗುತ್ತದೆ.